
25th August 2025
ನೇಸರಗಿ- ಜಿಲ್ಲಾ ಪಂಚಾಯತ, ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೈಲಹೊಂಗಲ, ಪ್ರಸೂತಿ ಗೃಹ, ನೇಸರಗಿ, ಗ್ರಾಮ ಪಂಚಾಯತ, ನೇಸರಗಿ, ಹಾಗೂ ರಕ್ತ ಭಂಢಾರ ಬಿಮ್ಸ್ ಆಸ್ಪತ್ರೆ ಬೆಳಗಾವಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ದಿ. 29 ರಂದು
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇಸರಗಿ ಗ್ರಾಮ ಪಂಚಾಯತ ಕಾರ್ಯಾಲಯ
ದಲ್ಲಿ ಹಮ್ಮಿಕೊಳ್ಳಲಾಗಿದೆ.
ರಕ್ತದಾನ ಶ್ರೇಷ್ಠದಾನ ಪುಣ್ಯ ಕಾರ್ಯವಾಗಿದೆ. ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು. ರಕ್ತ ನೀಡುವುದರಿಂದ ಶರೀರದಲ್ಲಿ ಮತ್ತೆ ರಕ್ತವು ಹೆಚ್ಚು ಉತ್ಪತ್ತಿಯಾಗುವುದರ ಜೊತೆಗೆ ನವಚೈತನ್ಯ ಉಂಟು ಮಾಡುತ್ತದೆ. ರಕ್ತದಾನದಿಂದ ಇನ್ನೊಂದು ಜೀವನವನ್ನು ಉಳಿಸಿದಂತಾಗುತ್ತದೆ.
18 ವರ್ಷ ಮೇಲ್ಪಟ್ಟು 55 ವರ್ಷದೊಳಗಿನ ಎಲ್ಲರೂ ರಕ್ತದಾನ ಮಾಡಬಹುದು.45 ಕೆ.ಜಿ.ಗಿಂತ ಮೇಲ್ಪಟ್ಟು ತೂಕವಿದ್ದವರು ರಕ್ತದಾನ ಮಾಡಬಹುದು.ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12 ಗ್ರಾಂ.ಕ್ಕಿಂತ ಮೇಲ್ಪಟ್ಟವರು ರಕ್ತದಾನ ಮಾಡಬಹುದು.ರಕ್ತ ಕೊಟ್ಟಂತಹ ದಾನಿಗೆ ಯಾವುದೇ ವಿಶೇಷ ಆಹಾರ ಔಷಧ ವಿಶ್ರಾಂತಿಯ ಅವಶ್ಯಕತೆ ಇರುವುದಿಲ್ಲ.ರಕ್ತ ಕೊಟ್ಟ 24 ಗಂಟೆಯೊಳಗೆ ಶರೀರದಲ್ಲಿ ರಕ್ತದ ಪ್ರಮಾಣ ಮೊದಲಿನಂತಾಗುತ್ತದೆ.
ರಕ್ತದಾನ ಮಾಡುವುದರಿಂದ ಯಾವುದೇ ರೋಗಕ್ಕೆ ತುತ್ತಾಗುವುದಿಲ್ಲ.ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೊರೆಯುವ ಲಾಭಗಳು:
ಹೃದಯಾಘಾತ ಸಂಭವ ಕಡಿಮೆ. ರಕ್ತದಲ್ಲಿ ಕೊಬ್ಬಿನ (ಫ್ಯಾಟ್) ಅಂಶ ಕಡಿಮೆಯಾಗುವುದು.ನೇಸರಗಿ ಗ್ರಾಮದ ಸಾರ್ವಜನಿಕರು, ಸೇವಾ ಸಂಸ್ಥೆಗಳು ಈ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತ ರಕ್ತದಾನ ಮಾಡಬೇಕೆಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ